ಶೈಕ್ಷಣಿಕ ಪ್ರವಾಸ: ಕೆಎಂಎಫ್ ಘಟಕಗಳಿಗೆ ಜ್ಞಾನಸರಸ್ವತಿ ಪಿಯುಸಿ ವಿದ್ಯಾರ್ಥಿಗಳ ಪ್ರವಾಸ- ಸಿದ್ದಾಪುರ

ಜ್ಞಾನಸರಸ್ವತಿ ಪಿಯು ಕಾಲೇಜು, ಸಿದ್ದಾಪುರದ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಉಡುಪಿ ಕೆಎಂಎಫ್ ಹಾಗೂ ಕುಲಶೇಖರ, ಮಂಗಳೂರು ಕೆಎಂಎಫ್ ಘಟಕಗಳಿಗೆ ಔದ್ಯಮಿಕ ಪ್ರವಾಸದ ನಿಟ್ಟಿನಲ್ಲಿ ಭೇಟಿ ನೀಡಿದರು.

ಭೇಟಿಯ ವೇಳೆ ಹಾಲು ಸಂಗ್ರಹಣೆ, ಸಂಸ್ಕರಣೆ, ಹಾಲು ಹಾಗೂ ಹಾಲಿನ ಇತರ ಉತ್ಪನ್ನಗಳ ಪ್ಯಾಕೇಜಿಂಗ್, ಶೀತಲೀಕರಣ ಹಾಗೂ ಗುಣಮಟ್ಟ ನಿಯಂತ್ರಣದ ವಿವಿಧ ಹಂತಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಆಧುನಿಕ ಯಂತ್ರೋಪಕರಣಗಳ ಕಾರ್ಯವಿಧಾನವನ್ನು ನೇರವಾಗಿ ವೀಕ್ಷಿಸಿದ ವಿದ್ಯಾರ್ಥಿಗಳು ಕೈಗಾರಿಕಾ ಕಾರ್ಯಾಚರಣೆಯ ಪ್ರಾಯೋಗಿಕ ಅರಿವು ಪಡೆದರು.
ವಿದ್ಯಾರ್ಥಿಗಳ ವೃತ್ತಿ ಅರಿವಿಗೆ ಪೂರಕವಾದ ಈ ಔದ್ಯಮಿಕ ಭೇಟಿ ಫಲಪ್ರದವಾಗಿ ನೆರವೇರಿತು. ಕಾಲೇಜಿನ ಉಪನ್ಯಾಸಕ ವೃಂದದವರು ಈ ಪ್ರವಾಸದಲ್ಲಿ ಮಕ್ಕಳ ಜೊತೆಗಿದ್ದು ಸಹಕರಿಸಿದರು.

Leave a comment

Sign in to post your comment or sine up if you dont have any account.